ತಿರುವನಂತಪುರಂ, ನವೆಂಬರ್ 07: ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಮಳೆಯ ನಡುವೆ ನಡೆದ ರೋಚಕ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ 6 ರನ್ ಗಳ ಜಯ ದಾಖಲಿಸಿದೆ. ಈ ಗೆಲುವಿನ ಮೂಲಕ ಸರಣಿಯನ್ನು 2 -1 ಅಂತರದಿಂದ ಭಾರತ ಗೆದ್ದುಕೊಂಡಿದೆ. ಮಳೆಯ ಕಾರಣ 8 ಓವರ್ ಗಳಿಗೆ ಸೀಮಿತವಾದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ 67/5 ಸ್ಕೋರ್ ಮಾಡಿತ್ತು. ಇದನ್ನು ಸಮರ್ಥವಾಗಿ ಚೇಸ್ ಮಾಡಿದ ನ್ಯೂಜಿಲೆಂಡ್ ತಂಡ ನಿಗದಿತವಾಗಿ ವಿಕೆಟ್ ಕಳೆದುಕೊಂಡರೂ ಕೊನೆ ಓವರ್ ತನಕ ಹೋರಾಟ ಮುಂದುವರೆಸಿತು. ಅಂತಿಮವಾಗಿ 61/6 ಸ್ಕೋರ್ ಮಾಡಿ ಸೋಲೊಪ್ಪಿಕೊಂಡಿತು. ಭಾರತದ ಪರ ಬೂಮ್ರಾ 2, ಕುಲದೀಪ್ ಯಾದವ್ ಹಾಗೂ ಭುವನೇಶ್ವರ್ ಕುಮಾರ್ ತಲಾ 1 ವಿಕೆಟ್ ಪಡೆದುಕೊಂಡರು. ಪಂದ್ಯಕ್ಕೆ ಮಳೆ ಅಡ್ಡಿಯಾದಾಗ ಟೀಂ ಇಂಡಿಯಾ ಆಟಗಾರರು ಮೈದಾನದಲ್ಲಿ ಫುಟ್ಬಾಲ್ ಆಡಿ ಕಾಲ ಕಳೆದರು. <br /> <br />India beat new zealand in the final t20 encounter in green fields. the match was reduced to an 8 overs game. Bumrah was the player of the match <br />